ಸ್ವಾತಂತ್ರ್ಯದ ಸವಿಯುಂಡವರು ನಾವು

freedom

ಹಿನ್ನೆಲೆ: ಅಗಸ್ಟ್ ೧೫, ೨೦೦೩ ರಲ್ಲಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಬರೆದದ್ದು

ಸ್ವಾತಂತ್ರ್ಯದ ಗುಂಗಿನಲ್ಲಿರುವ
ಗುಂಗಾಡುಗಳು ನಾವು.

ಒಮ್ಮೆ ರಾಜಧಾನಿಯೆಡೆಗೆ
ಕತ್ತೆತ್ತಿ ನೋಡಿ; ಕತ್ತಿಗಳು
ಹೇಗೆ ಬೀಸುತ್ತಿವೆಯೆಂದು.

ಬ್ರಿಟಿಷರೇನು ಮಹಾ!
ಎರಡು ಶತಮಾನಗಳು
ಬೇಕಾದವು; ಬಡವಾಗಿಸಲು
ಈಗಿನ ಮಹಾನಾಯಕರು
ಬಲು ಕ್ರಿಯಾಶೀಲರು
ಶ್ರಮಜೀವಿಗಳು
‘ಕಾಯಕವೇ ಕೈಲಾಸ’ ಎಂದರಿತವರು
ಅರ್ಧ ಶತಮಾನವೇ ಸಾಕಾಗಿ ಹೋಯಿತು;
ಒಂದುವರೆ ಶತಮಾನಗಳ ಅಂತರದಿಂದ
ಬಿಳಿಯರ ವಿರುದ್ಧ ಪ್ರಚಂಡ ವಿಜಯ.

ನೆಲದ ಮೇಲಿನ ಹುಲ್ಲನ್ನೂ ಸಹ ಬಿಡದವರು
ಅಂದಮೇಲೆ ಇವರೇಷ್ಟು ಮಹಾನ್ ನಾಯಕರು!
ಇಂಗ್ಲಿಷರು ಇವರ ಮುಂದೆ ಯಾವ ಲೆಕ್ಕ ಅಲ್ಲವೇ?

ಸ್ವಾತಂತ್ರ್ಯ ಸಿಕ್ಕಿಲ್ಲ ನಮಗೆ,
ಸಿಕ್ಕಿದೆ ನಮ್ಮ ರಾಜಕಾರಣಿಗಳಿಗೆ.
ಪಂಚೆಯುಟ್ಟ ಫಕೀರನ ಕನಸನ್ನು
ಪಂಚೆಯಲ್ಲಿಯೇ ಸುತ್ತಿ ಗಂಟು ಹಾಕಿ
‘ಅ’ಪವಿತ್ರ ಗಂಗಾ ನದಿಯಲ್ಲಿ ಬಿಟ್ಟು
ಆತ್ಮಕ್ಕೆ ಶಾಂತಿ ಕೋರುವ ಸಹೃದಯಿಗಳಿವರು.

ಗಾಂಧಿಗೇನು ಗೊತ್ತು ಪಾಪ!
ಆತನಿರೋದು ಫೊಟೊದಲ್ಲಿ ಮಾತ್ರ!
ಇಂಥಹ ಪರಿಸ್ಥಿತಿ ಬಂದಿರುವಾಗ
ಆಗಸ್ಟ್ ಹದಿನೈದಕ್ಕಾದರೂ ದೇಶವನ್ನು
ನೆನೆಯಲೇ ಬೆಕಲ್ಲವೆ?

– ಅಮಿತ ಪಾಟೀಲ
೧೫-೮-೨೦೦೩, ಆಲಗೂರ

Advertisements

4 thoughts on “ಸ್ವಾತಂತ್ರ್ಯದ ಸವಿಯುಂಡವರು ನಾವು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s