ಅಮೃತ ಘಳಿಗೆ

amrutavarshini

ಹಿನ್ನೆಲೆ: ಈ ಕವಿತೆ ಆಗಸ್ಟ್ ೪, ೨೦೦೨ ರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿತ್ತು.
—————————————————

ಮಧುರ ಮನೋಹರ
ನಮ್ಮ ಸಮ್ಮಿಲನ
ಈ ಸಮಯದಿ |

ಎಂಥಹ ಸುಂದರಮಯ
ಸಂಬಂಧಕ್ಕೆ ನಾಂದಿಯಾಯಿತು
ಈ ವಿಸ್ಮಯ ವಿಧಿ |

ಪ್ರೇಮಾಂಕುರದ ಸೊಬಗು
ಅನುಭವಿಸಲು ಈಗ
ತಾರುಣ್ಯದ ಸರದಿ |

ಸಮಯ ಸಾಧಿಸಿ
ನನ್ನೊಳಗೆ ಹೊಕ್ಕ
ನೀ ಸಮಯವಾದಿ |

ಹೃದಯ ಬಂಧನದಲ್ಲಿ
ಭದ್ರ ಕಾವಲಿನಲ್ಲಿ ನೀ
ನನ್ನ ಪ್ರೇಮಖೈದಿ |

ಅಮೃತ ಘಳಿಗೆಯಲ್ಲಿ
ನಾವು ತುಳಿದೆವು
ಪವಿತ್ರ ಸಪ್ತಪದಿ |

ಮಾನಸ ಸರೋವರದ ಮೇಲೆ
ಪ್ರಣಯದ ಲೀಲೆಯಲ್ಲಿ
ನನ್ನೋಡನೆ ಮಡದಿ |

ಪ್ರತಿ ಘಳಿಗೆಗೂ ವಿಲಾಸ ಕುಸುಮ
ಚೆಲ್ಲಿ ನಡೆದಿದೆ ನಮ್ಮ ಜೋಡಿ
ಪ್ರಣಯದಾ ಪಯಣದಿ |

– ಅಮಿತ ಪಾಟೀಲ, ಆಲಗೂರ
ಆಗಸ್ಟ್ ೪, ೨೦೦೨

Advertisements

One thought on “ಅಮೃತ ಘಳಿಗೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s