ರತಿಕೋಮಲೆ

ಹೇಯ್ ಸುಂದರಾಂಗ
ಹುಡುಕುತ್ತಿರುವೆ ಹಗಲಿರುಳು
ಬಚ್ಚಿಟ್ಟುಕೊಂಡಿರುವೆಯೆಲ್ಲಿ?
ನೂರು ಕೋಟಿ ಸೂರ್ಯರು
ಮುಗಿಲಿಗೆ ತೂತು ಹೊಡೆದು
ಕದ್ದು ಮುಚ್ಚಿ ನಂಗೆ ಲೈನ್ ಹಾಕುತ್ತದ್ದರೂ
ಅಸೂಯೆ ಹುಟ್ಟದೇ ನಿನಗೆ?
ನಂಗೊತ್ತು ಆ ನೂರು ಕೋಟಿಯಲ್ಲಿ
ನೀನೂ ಇದ್ದಿಯಾ ಅಂತ
ಬಾ ಬೇಗ ಬಿಗಿದಪ್ಪು ಈ
ರತಿಕೋಮಲೆಯನ್ನು
ಮದವೇರಿದೆ ಮುದನೀಡು
ತಾಕಿಸು ನಿನ್ನ ಬಿಸಿಯುಸಿರು
ನನ್ನ ಅನೂಹ್ಯ ಬಾಹುಬಂದನದೊಳು ಐಕ್ಯವಾಗು.

– ಅಮಿತ ಪಾಟೀಲ, ಆಲಗೂರ
೨೪-೦೧-೨೦೧೭

ಕವಿಯ ಕ್ಷಣಗಳು

​ಮಂಜು ಅಪ್ಪಿಕೊಂಡ
ಮುಂಜಾವಿನ ಮುಸುಕಿನಲಿ
ಮಂಜಿಗೆ ಮುದ್ದಿಟ್ಟವು
ಭಾನುವಿನ ಬಾಣಗಳು|

ಭಾನುವಿನ ಬಾಣಗಳ
ಬಿಸಿ ತಾಳಲಾರದೆ
ಎಲೆ-ಹುಲ್ಲುಗಳ ತಳಕ್ಕೆ
ಜಾರಿದವು ಮಂಜು ಕಣಗಳು|

ಮುಂಜಾವಿನ ಸುಪ್ರಭಾತದ
ಇಂಪಾದ ಸ್ವರ ಸಮ್ಮೇಳನ
ಏರ್ಪಡಿಸಿದವು ಹಕ್ಕಿಗಳ
ನೂರಾರು ಬಣ್ಣದ ಬಣಗಳು|

ಹೂವಿನಿಂದ ಹೂವಿಗೆ
ಹಾರಿ ಪರಾಗ ಕಣಗಳನ್ನು
ಪೂರೈಸಿದವು ಝೇಂಕರಿಸುವ
ಮುದ್ದು ಮಧುವಣಗಿತ್ತಿಗಳು|

ವರ್ಣರಂಜಿತ ಕವಿತೆ
ಗೀಚಲು ಕವಿಯನ್ನು ಅಪ್ಪಿ
ಮುದ್ದಿಟ್ಟವು ಈ ಮುಂಜಾವಿನ
ಸುಮಧುರ ಕ್ಷಣಗಳು|

– ಅಮಿತ ಪಾಟೀಲ, ಆಲಗೂರ
೮-೧೨-೨೦೧೬

ಮನಮೋಹಿನಿ

ಯಾವ ಮೋಹಿನಿಯೋ ನೀನು ಅರಿಯೆನು
ನಯನದಾಶೆಯ ಪೂರೈಸಬೆಕೆಂದಾಗ
ನಿನ್ನ ಒಂದು ಅಣುವೂ ಸಹ ಕಾಣದು
ಆಶೆ ಉಕ್ಕಿ ಉಕ್ಕಿ ಆರಿಹೋದಾಗ
ಮಿಂಚು ಹುಳದಂತೆ ಕಣ್ಣೆದುರಿಗೆ ಬಂದು
ಮಿಂಚಿ ಮಾಯವಾದಾಗ
ಆ ಅರೆ ಕ್ಷಣಗಳನ್ನೇ ನಾ ನೆನೆದು ನೆನೆದು
ಕಣ್ಣಲ್ಲೇ ಛಾಯಾಗ್ರಹಿಸಿ
ವರುಷಗಟ್ಟಲೆ ಮೆಲುಕು ಹಾಕಿ ಸುಖಿಸುವೆ.

ಒಂದೊಂದು ಸಾರಿ ನೀ
ಜಿಟಿ ಜಿಟಿ ಸೊನೆ ಮಳೆಯಂತೆ ಕಾಡಿ
ಸುಮ್ಮಸುಮ್ಮನೆ ಸುರಿದು ಚಳಿಯುಂಟುಮಾಡಿ
ಬೆಚ್ಚನೆಯ ನೆಮ್ಮದಿಯ ನಿದ್ರೆ ನೀಡಿ
ಕನಸಿನಲ್ಲಿಳಿದು ಶೃಂಗಾರ ಕಾವ್ಯ ಹಾಡಿ
ಪ್ರೀತಿಯ ಹಚ್ಚೆ ಚುಚ್ಚುವೆ ಹೃದಯದಡಿ.

ಭೂಮಿಯೇ ವಶವಾದಹಾಗೆ, ಸೂರ್ಯನಿಗಾಗಿ
ನೀನು ನನ್ನ ವಶವಾಗಲು ಪ್ರೀತಿಗಾಗಿ
ಕಲಿಯುತ್ತಿರುವೆ ಸಮ್ಮೋಹಿನಿ ವಿದ್ಯೆ ನಿನಗಾಗಿ
ನಂಬಿಕೆಯನ್ನು ನಂಬು ನೀ ನನಗಾಗಿ
ನೀ ನನ್ನೊಳ ಹೊಕ್ಕು ಬಾ ಅಮೃತಧಾರೆಯಾಗಿ
ನಮ್ಮಿಬ್ಬರ ಪ್ರೀತಿಯ ಕಡಲಲ್ಲಿ ನಿರಂತರವಾಗಿ
ಬರಿ ಪ್ರೀತಿಗಾಗಿ.. ಪ್ರೀತಿಗಾಗಿ.. ಪ್ರೀತಿಗಾಗಿ…

– ಅಮಿತ ಪಾಟೀಲ, ಆಲಗೂರ

೦೫-೧೧-೨೦೧೬

ಅಮೃತವರ್ಷಿಣಿ

ಸಮ್ಮೋಹಿನಿ ನೀ
ಸಮ್ಮೋಹಿನಿ

ಸಕಲವಿದ್ಯಾ
ಸಂಪನ್ನ
ಸೌಂದರ್ಯ
ಸ್ವರೂಪಿಣಿ

ಸುಮಧುರ
ರಾಣಿ
ಸಂಗೀತ
ಗಾನವಾಣಿ

ಪ್ರಖರತೆಯ
ಕಿರಣಜನ್ಯ
ಮಣಿ

ಅಮೃತರಸಧಾರಿಣಿ
ಹೃದಯವಂತಿಕೆಯ
ಮಂದಾಕಿನಿ

ಸುಕೋಮಲ
ಹೃದಯಸ್ಪರ್ಷಿಣಿ
ನೀ ನನ್ನ
ಅಮೃತವರ್ಷಿಣಿ.

– ಅಮಿತ ಪಾಟೀಲ, ಆಲಗೂರ
೦೪-೧೧-೨೦೧೬

ಸೀಮೆಯಾಚೆ ಸುಂದರಿಗೆ…

seeme_yache_sundari

ಸೀಮೆಯಾಚೆ ಸುಂದರಿಯೇ!

ಮಧುಗಿಂತಲೂ ಸಿಹಿ
ಹೀರಿ ನೋಡ ಈ ಕನ್ನಡ !

ಕೋಗಿಲೆಗಿಂತಲೂ ಮಧುರ
ಬಾರ ಕನ್ನಡದಲ್ಲೊಮ್ಮೆ ಹಾಡ !

ಚಿನ್ನಕ್ಕಿಂತಲೂ ಪರಮ
ಕನ್ನಡದಲ್ಲೊಮ್ಮೆ ಮಾತಾಡ !

ಹಾಲಿಗಿಂತಲೂ ಶುಧ್ಧ
ಓದಿದರ ದೂರ ನಿನ್ನ ದುಗುಡ !

ಪ್ರಕೃತಿಯ ಮಹಾರಾಜ
ನೋಡಬಾರ ನಮ್ಮ ಮಲೆನಾಡ !

ಸುವಾಸನೆಗೆ ಸವಾಲು
ಕನ್ನಡಿಗರ ಹೆಮ್ಮೆ ಶ್ರೀಗಂಧ ಗಿಡ !

ಕಲ್ಲಿನಲ್ಲಿ ಜೀವವಿರುವ
ಶೃಂಗಾರ ಶಿಲ್ಪಕಲಾ ಬೀಡ !

ಮುಗಿಯದ ಐಶ್ವರ್ಯ
ಕನ್ನಡ ಯಾವಾಗಲೂ ತುಂಬಿದ ಕೊಡ !

ಬಲಗಾಲಿಟ್ಟು ಒಳಗೆ ಬಾರ
ನಾಚಿ ಹೊರ ನಿಲ್ಲಬೇಡ !

ನೀ ಎಂದೂ ಮರೆಯಲಾಗದ
ಈ ಕಸ್ತೂರಿ ಕನ್ನಡ ಚಂದನದ ಬೀಡ.

– ಅಮಿತ ಪಾಟೀಲ, ಆಲಗೂರ
೧-೧೧-೨೦೧೬

ಕನ್ನಡದ ಸುಂದರವಾದ ಅಂತರ್ಜಾಲ ತಾಣಗಳು

ಚುಕ್ಕುಬುಕ್ಕು: http://chukkubukku.com/
ಸಂಪದ: http://sampada.net/
ಪ್ಲ್ಯಾನೆಟ್ ಕನ್ನಡ: http://www.planetkannada.com/
ಕಣಜ: http://kanaja.in/

IT Companies Located In Belgaum

IT Companies Located In Belgaum:

Image

Belgaum is a fast growing city in the north Karnataka, Especially in IT industry. I tried to collect the well known IT companies located at Belgaum here.

1. Fortune InfoServeIndia Pvt. Ltd
2. Inventica Technologies
3. BelgaumOnline IT Solutions
4. dotCORD IT Solutions Pvt. Ltd
5. Vi2web Technologies:http
6. Ingenious Pundits
7. 3PixelArt: http
8. 3i Global
9. agriMitra
10. All About Belgaum.com
11. Btp InfoServe Pvt. Ltd
12. CallerInfoID
13. Conqcore Solutions
14. eth1 Network Solutions
15. HutGeeks Software Solutions
16. IdeaFlask
17. Spundhan Softwares
18. Vayavya Labs Pvt. Ltd
19. DbCom Systems Pvt Ltd
20. Rachana Infotech Pvt. Ltd
21. Deltra Software
22. TechTree IT Systems
23. Softmusk Solutions
24. Swiz Technologies
25. W3effects
26. DS Corporation

27. Credence Information Services LLP